ನಟರಾಜ್ ಎಸ್. ಭಟ್ ಕನ್ನಡ ಚಲನಚಿತ್ರ ನಟರಾಗಿದ್ದು, ೨೦೧೬ರಲ್ಲಿ ಬಿಡುಗಡೆಯಾದ "ರಾಮಾ ರಾಮಾ ರೇ..." ಎಂಬ ಕನ್ನಡ ಚಲನಚಿತ್ರದಲ್ಲಿ ನಾಯಕ ನಟನಾಗಿ ಹೆಸರು ಪಡೆದಿದ್ದಾರೆ. . == ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆ == ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನವರಾದ ಇವರು, ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ತಿಪಟೂರು, ಹಾಗೂ ಕಡೂರಿನಲ್ಲಿ ಪೂರೈಸಿದರು. ೧೯೮೪ ಫೆಬ್ರವರಿ ೨೩ರಂದು ಸುಬ್ರಮಣ್ಯ ಭಟ್‌ ಹಾಗೂ ಸರಸ್ವತಿ ದಂಪತಿಗಳಿಗೆ ತಿಪಟೂರಿನಲ್ಲಿ ಜನಿಸಿದರು. ಕಲಾ ವಿಭಾಗದಲ್ಲಿ ಪದವವೀಧರರಾದ ಇವೆರು ಕುವೆಂಪು ವಿಶ್ವವಿದ್ಯಾಲಯದಿಂದ ಕಾನೂನು ಶಾಸ್ತ್ರದಲ್ಲಿ ಪದವಿಯನ್ನೂ ಪಡೆದಿದ್ದಾರೆ. == ವೃತ್ತಿ ಜೀವನ == ನಿರ್ದೇಶಕ ಪಿ.ಶೇಷಾದ್ರಿಯವರೊಂದಿಗೆ ಸಹಾಯಕ ನಿರ್ದೇಶಕರಾಗಿ ಚಲನಚಿತ್ರ ರಂಗವನ್ನು ಪ್ರವೇಶಿಸಿದ ನಟರಾಜ್‌, ಹಲವಾರು ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ೨೦೧೬ರಲ್ಲಿ ಬಿಡುಗಡೆಯಾದ "ರಾಮಾ ರಾಮಾ ರೇ..." ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದರು. ಇವರು ಕನ್ನಡ ರಂಗ ಭೂಮಿಯಲ್ಲೂ ನಿರಂತರ ಚಟುವಟಿಕೆಯಲ್ಲಿ ಇದ್ದಾರೆ. == ಚಲನಚಿತ್ರ ಹಾಗೂ ಧಾರಾವಾಹಿಗಳ ಪಟ್ಟಿ == === ನಟಿಸಿದ ಕನ್ನಡ ಚಲನಚಿತ್ರಗಳ ಪಟ್ಟಿ === === ಧಾರಾವಾಹಿಗಳ ಪಟ್ಟಿ === == ಉಲ್ಲೇಖಗಳು ==